JEEAdvanced 2026 Result

ಜೆಇಇ ಅಡ್ವಾನ್ಸ್‌ 2026 ಫಲಿತಾಂಶ - ಎಕ್ಸೆಲ್‌ ಗುರುವಾಯನಕೆರೆಗೆ ರಾಷ್ಟ್ರ ಮಟ್ಟದಲ್ಲಿ 42ನೇ ರ‍್ಯಾಂಕ್ ಭಾರತೀಯ ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದ ಉನ್ನತ ಸಂಸ್ಥೆಗಳಾದ ಐಐಟಿ, ಎನ್ ಐ ಐ ಟಿ, ಐ ಐ ಐ ಟಿ ಗಳಿಗೆ ಪ್ರವೇಶ ಕಲ್ಪಿಸುವ ಜೆ ಇ ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ. ಜೆಇಇ ಅಡ್ವಾನ್ಸ್‌ 2026 ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ರ‍್ಯಾಂಕ್ ಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ವಿನಯ್‌ ಕೆ ಸಜ್ಜನಾರ್‌ - AIR 42, ಸಮ್ಯಕ್‌ ವಿನಯ್‌ - AIR 725, ಪುನೀತ್‌ ಕುಮಾರ್‌ ಎಸ್‌ - AIR 2041, ಶ್ರೀಶಾಂತ್‌ ಎಸ್ AIR 2482, ಅಕ್ಷಯ್‌ ಎ AIR 3163, ಆದಿತ್ಯ ವಿನೋದ್‌ ಛಲವಾದಿ AIR 5095, ಶಶಾಂಕ್‌ ಗೌಡ AIR 5647, ತೇಜಲ್‌ ವಂಟಕಾರ್‌ AIR 7134, ಶಮಿತ್‌ ಗೌಡ ಎ.ಎಸ್‌ AIR 8147, ಸ್ವಸ್ಥಿಕ್‌ ಎಂ ಜೈನ್‌ AIR 8580, ರಾಂಕ್ ಗಳಿಸಿದ್ದು,ಶೈಕ್ಷಣಿಕ ಸಾಧಕರನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್,ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.